ಹಿಮಾಶ್ಮ ಪ್ರವಾಹ -
ಪರ್ವತದ ಇಳಿಜಾರಿನಲ್ಲಿ ಸಂಗ್ರಹಗೊಂಡ ಅಗಾಧ ಹಿಮರಾಶಿ ತನ್ನ ಗುರುತ್ವದ ನೆಲೆ ತಪ್ಪಿ, ಜಾರುತ್ತ ಕೆಳಗೆ ಉರುಳಿಕೊಂಡು ಬೀಳುವ ವಿದ್ಯಮಾನ (ಆ್ಯವಲಾಂಚ್). ಪರ್ವತದ ಇಳಿಜಾರು ಭಾಗ(ಬದಿ) 22ಲಿಗಿಂತಲೂ ಹೆಚ್ಚು ಕಡಿದಾಗಿದ್ದಾಗ ಅಲ್ಲಿ ಅತ್ಯಧಿಕ ಮಂದದ ಹಿಮ ಮುಚ್ಚಿಕೊಂಡಿರುವುದು. ಹೀಗೆ ಸಮತೋಲ ದಲ್ಲಿ ಶೇಖರವಾಗಿರುವ ಹಿಮರಾಶಿಯ ಮೇಲೆ ರೈಲುಗಾಡಿಯ ಚಲನೆಯಿಂದಾಗುವ ಸ್ಪಂದನ, ಮನುಷ್ಯ ಅಥವಾ ಪ್ರಾಣಿ ಪಾದಾಘಾತ, ಮರದಕೊಂಬೆ ಬೀಳುವಿಕೆ, ಸಿಡಿಲಿನ ತೀವ್ರತರ ಶಬ್ದದಿಂದಾಗುವ ಕಂಪನ ಮುಂತಾದ ಯಾವುದೇ ಆಘಾತವಾದಾ ಬಡಿದಾಗ ಅದರ ಸಮತೋಲಕ್ಕೆ ಭಂಗ ಬರಬಹುದು. ಇದರ ಪರಿಣಾಮವೇ ಹಿಮಾಶ್ಮ ಪ್ರವಾಹ. ಇದು ಗಂಟೆಗೆ ಸುಮಾರು 32 -320 ಕಿಮೀ ವೇಗದಲ್ಲಿ ಚಲಿಸಿ ತನ್ನ ದಾರಿಗೆ ಅಡ್ಡ ಬರುವುದನ್ನೆಲ್ಲ ತನ್ನೊಡನೆ ಕೊಂಡೊಯ್ಯುವ ಹಾಗೂ ಪುಡಿಗೈಯ್ಯುವ ವೇರಕ ಪ್ರವಾಹ. ಇಂಥ ಪ್ರವಾಹದಲ್ಲಿ ಹಿಮಾಶ್ಮ ಕ್ಕಿಂತಲೂ ಅದರ ಆಘಾತದಿಂದ ಉಂಟಾದ, ಮುಂದೆ ಚಲಿಸುವ ಗಾಳಿಯ ಅನಾಹುತವೇ ಹೆಚ್ಚು. ಹಿಮಾಶ್ಮ ಪ್ರವಾಹದ ದೆಸೆಯಿಂದ ಚಲಿಸುವ ಗಾಳಿ (ಆ್ಯವಲಾಂಚ್ ವಿಂಡ್) ಭೀಕರ ಸುಂಟರಗಾಳಿಯಷ್ಟೇ ಹಾನಿಕಾರಿ. 1819ರಲ್ಲಿ ಆಲ್ಪ್ಸ್ ಪರ್ವತಗಳಲ್ಲಿ ಸಂಭವಿಸಿದ ಹಿಮಾಶ್ಮ ಪ್ರವಾಹವೊಂ ದರ ಪರಿಣಾಮವಾಗಿ, ಉಂಟಾದ ಪ್ರಾಣಹಾನಿ ಆಸ್ತಿ ನಷ್ಟ ಅಪಾರ. ಕೆಲವೊಮ್ಮೆ ಚಳಿಗಾಲದಲ್ಲಿ ಹಿಮಮಯವಾಗಿದ್ದು,     ಬೇಸಗೆಯಲ್ಲಿ ಹಿಮರಹಿತವಾಗಿರುವ ಪರ್ವತ ಪ್ರದೇಶಗಳಲ್ಲೂ ಹಿಮದೊಂದಿಗೆ ಬಂಡೆಗಳ ಪ್ರವಾಹ ಹರಿಯುವುದುಂಟು.

	ಸ್ವಿಸ್ ಆಲ್ಪ್ಸ್ ಪರ್ವತಪ್ರದೇಶದಲ್ಲಿ ವಾಸಿಸುವ ಜನಕ್ಕೆ ಹಿಮಾಶ್ಮ ಪ್ರವಾಹಗಳ ಹಾವಳಿ ಆಗುತ್ತಲೇ ಇರುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ಪ್ರವಾಹಗಳು ಜನಹೀನಪ್ರದೇಶಗಳಾದ ಪರ್ವತಗಳ ಇಳಿಜಾರಿನಲ್ಲಿ ಸಂಭವಿಸುತ್ತಿರುತ್ತವೆ. ಇವುಗಳಿಂದ ಆಗುವ ಅಪಾಯ ದಿಂದ ಭೀತಿ ಮತ್ತು ಹಾನಿ ಭೂಕಂಪನ, ಬಿರುಗಾಳಿ ಮೊದಲಾದವುಗ ಳಷ್ಟು ಪ್ರಬಲ ಅಲ್ಲ. ಹಿಮಾಶ್ಮ ಪ್ರವಾಹದ ಅಪಾಯ ನಿವಾರಣೆಗಾಗಿ ಅನೇಕ ಉಪಾಯಗಳನ್ನೂ ಸಂರಕ್ಷಣಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅವುಗಳ ಪೈಕಿ ಮುಖ್ಯವಾದವು: ಮರಗಳನ್ನು ನೆಟ್ಟು ಪ್ರವಾಹ ತಡೆದುನಿಲ್ಲುವಂತೆ ಮಾಡುವುದು, ಮರಗಳನ್ನು ನೆಡಲು ಸಾಧ್ಯವಾಗದಿದ್ದಲ್ಲಿ ಪ್ರವಾಹಗಳನ್ನು ತಡೆಯುವಂಥ ಒಡ್ಡುಗಳನ್ನು ನಿರ್ಮಿಸುವುದು. ಪರ್ವತದ ಇಳಿಜಾರಿನಲ್ಲಿ ಅಡ್ಡಕ್ಕೆ ಕಂದಕ ಅಥವಾ ಮೆಟ್ಟಲುಗಳ ರಚನೆ ಇನ್ನೊಂದು ಬಗೆಯ ರಕ್ಷಣೋಪಾಯ. ಒಮ್ಮೊಮ್ಮೆ ಹಿಮ ದ್ರವಿಸಿದುದರಿಂದ ಉಂಟಾದ ನೀರು ನೆಲವನ್ನೆಲ್ಲ ತೊಯ್ದು, ಕೊಚ್ಚಿ, ಭೂಪ್ರಪಾತದ ಅಪಾಯ ಸಂಭವಿಸುವುದೂ ಉಂಟು. ಚಿಕ್ಕ ಗಾತ್ರದ ಹಿಮರಾಶಿಗಳು ಪರ್ವತಪಾಶ್ರ್ವದಲ್ಲಿ ದೊಡ್ಡಗಾತ್ರಕ್ಕೆ ಬೆಳೆಯದಂತೆ ಮಾಡಲು ಅವುಗಳ ನೆಲೆ ತಪ್ಪಿಸಿ ಕೆಡವಿಹಾಕುವುದರಿಂದಲೂ ಪ್ರವಾಹದಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದುಂಟು.
	(ಎಮ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ